ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ
ತುಮಕೂರಿನ ರಿಂಗ್ ರಸ್ತೆ, ಬಡ್ಡಿಹಳ್ಳಿ ಕ್ರಾಸ್, ಹತ್ತಿರವಿರುವ ಕಟ್ಟಡ ಕಾರ್ಮಿಕರ ಕಾಲೋನಿಯಲ್ಲಿ ನಿನ್ನೆ ರಾತ್ರಿ ಚಳಿಯಲ್ಲಿ ನಡುಗುತ್ತಿದ್ದ ವಯಸ್ಸಾದ ವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಉಲ್ಲನ್ ಹೊದಿಕೆಗಳು ಹಾಗೂ ಸ್ವೆಟರ್ ಮತ್ತು ಟೋಪಿಗಳನ್ನು ವಿತರಿಸಲಾಯಿತು. ರಾತ್ರಿ ವೇಳೆಯನ್ನು ಆಯ್ದುಕೊಳ್ಳುವ ಕಾರಣವೇನೆಂದರೆ ಮಿಕ್ಕ ವೇಳೆಗಳಲ್ಲಿ ಕೂಲಿ ಕೆಲಸಗಳಿಗೆ ಇವರೆಲ್ಲರೂ ಹೊರಟು ಹೋಗುವುದರಿಂದ ಇವರಿಗೆಲ್ಲಾ ಸಹಾಯ ನೀಡಲು ಬೆಳಗಿನ ಜಾವ ಅಥವಾ ರಾತ್ರಿ ಭೇಟಿ ನೀಡಬೇಕಾಗುತ್ತದೆ. ತಾ.5-1-2026ರಂದು ಪೂಜ್ಯ ಸ್ವಾಮಿ ಜಪಾನಂದಜೀ ಹಾಗೂ ಪ್ರೊ.ಪರಶುರಾಮ್ ಮತ್ತು ಎಂ.ಎಸ್.ಡಬ್ಲ್ಯೂ. ಸ್ವಯಂಸೇವಕರ ತಂಡ ತಡ ರಾತ್ರಿಯಲ್ಲಿ ಚಳಿಯಲ್ಲಿ ಪ್ರತಿಯೊಂದು ಗುಡಿಸಲಿಗೂ ಭೇಟಿ ನೀಡಿ ನೊಂದವರಿಗೆ ಸಹಾಯಹಸ್ತವನ್ನು ನೀಡಿದರು. ಈವರೆವಿಗೆ ಸರಿಸುಮಾರು 1500ಕ್ಕೂ ಮಿಗಿಲಾದ ಹೊದಿಕೆಗಳು ಹಾಗೂ 500ಕ್ಕೂ ಮಿಗಿಲಾದ ಸ್ವೆಟರ್, ಟೋಪಿ ಮತ್ತು ಮಕ್ಕಳ ಸ್ವೆಟರ್ಗಳನ್ನು ನೀಡಲಾಗಿದೆ ಎಂದು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿರುತ್ತಾರೆ. ಇದೇ ವೇಳೆಯಲ್ಲಿ ಪಾವಗಡದಲ್ಲಿ ಸೊಪ್ಪು ಮಾರುವವರು, ಆರ್ಥಿಕವಾಗಿ ಹಿಂದುಳಿದು ಈ ಶೀತ ವಾತಾವರಣದಲ್ಲಿ ನರಳುತ್ತಿರುವವರಿಗೆ ಹೊದಿಕೆಗಳು ಹಾಗೂ ಸ್ವೆಟರ್ಗಳನ್ನು ಇಂದಿಗೂ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಪ್ರತಿ ವರುಷದಂತೆ ಈ ವರ್ಷವೂ ಚಳಿಗಾಲದ ಸೇವೆಯನ್ನು ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
