ತುಮಕೂರು ಮಧುಗಿರಿ ಭೀಮ್ ಆರ್ಮಿ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ನಟರಾಜ್ ಮೌರ್ಯರವರ ಹುಟ್ಟು ಹಬ್ಬವನ್ನು ಜಿಲ್ಲಾ ಭೀಮ್ ಆರ್ಮಿ ಘಟಕದ ವತಿಯಿಂದ ಆಚರಿಸಲಾಯಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅಯ್ಯನಪಾಳ್ಯ ಶ್ರೀನಿವಾಸ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಕೀರ್ತಿದೊಡ್ಡಗುಣಿ, ಜಿಲ್ಲಾ ಸಮಿತಿ ಸದಸ್ಯರಾದ ಹನುಮಂತರಾಯಪ್ಪ ಜಿ.ಕೆ, ಕೊರಟಗೆರೆ ತಾಲ್ಲೂಕ್ ಅಧ್ಯಕ್ಷರಾದ ಸುರೇಶ್ ಗಟ್ಲಲ್ಲಿ, ಮಧುಗಿರಿ ನಗರಾಧ್ಯಕ್ಷರಾದ ಮಹೇಶ್ ಗೌಡ, ಉಪಾಧ್ಯಕ್ಷರುಳಾದ ರಂಗನಾಥ್, ಪ್ರದೀಪ್, ಸಿದ್ದೇಶ್, ತಿಮ್ಮರಾಜು, ಯುವ ಮುಖಂಡರಾದ ಪವನ್ ಕುಮಾರ್, ಉದಯ್ ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.
