ತುಮಕೂರು- ಆಧುನಿಕ ನಾಟಕವನ್ನು ಪ್ರಭಾವಿಸಿದ ಮಹನೀಯರಲ್ಲಿ ವಿಶ್ವಮಾನವ ಕವಿ ಡಾ. ಕುವೆಂಪುರವರು ಅಗ್ರಗಣ್ಯರು. ಈ ಮಹಾಚೇತನ ಇತ್ತೀಚಿನ ಯುವಪೀಳಿಗೆಗೆ ವಿಶ್ವಮಾನವ ಪ್ರಜ್ಞೆಯ ಬೀಜಗಳನ್ನು ರೂಪಗೊಳಿಸುವ ಗುರುತರ ಪಾತ್ರ ಮಹತ್ವವಾದದ್ದು ಎಂದು ಹಾಸ್ಯ ಭಾಷಣಕಾರರಾದ ಶ್ರೀಮತಿ ಸುಧಾ ಬರಗೂರು ಅಭಿಪ್ರಾಯಪಟ್ಟರು.
ದಿನಾಂಕ ೦೨-೦೧-೨೦೨೬ರಂದು ಕುವೆಂಪು ನಗರದ, ಕುವೆಂಪು ನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕುವೆಂಪುರವರ ೧೨೧ನೇ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯ ಕ್ರಮದ ಉದ್ಘಾಟನೆಯನ್ನು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರು ಹಾಗೂ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆ ನಿವೃತ್ತ ಕಾರ್ಯದರ್ಶಿಗಳಾದ ಶ್ರೀ ಕೆ.ಜೈಪ್ರಕಾಶ್ ಕುವೆಂಪು ನಗರ ಬಡಾವಣೆಯ ಅಭಿವೃದ್ಧಿಯ ಕಿರುಪರಿಚಯವನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಕುವೆಂಪು ನಗರದ ನಾಗರೀಕರಾದ ಬಯೋನೀಡ್ಸ್ ಕಂಪನಿಯ ಮಾಲೀಕರಾದ ಡಾ|| ವಿನಯ್ ಬಾಬು, ಎಂ.ಎಸ್.ನಾಗರಾಜು (ಅಪ್ಪಾಜಿ), ಹೋಟೆಲ್ ಉದ್ದಿಮೆದಾರರಾದ ಶ್ರೀ ದೇವೇಂದ್ರಪ್ಪ ಹಾಗೂ ತುಮಕೂರು ಮಹಾನಗರ ಪ್ರತಿಷ್ಠಿತ ಜವಳಿ ಅಂಗಡಿ ಕಾವೇರಿ ಸಿಲ್ಕ್÷್ಸ ಮತ್ತು ಸ್ಯಾರೀಸ್ನ ಮಾಲೀಕರಾದ ಶ್ರೀ ರಾಜಶೇಖರ್ರವರನ್ನು ವಿಶೇಷವಾಗಿ ಸನ್ಮಾನ ಮಾಡಲಾಯಿತು. ಬಡಾವಣೆಯ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಎರಡನೇ ವರ್ಷದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಹೊಂದಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷರಾದ ಶ್ರೀ ಕೆ.ಬಸವನಗೌಡರು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀ ಜಿ.ವಿ.ಶ್ರೀನಿವಾಸ್, ಅಧ್ಯಕ್ಷರು, ಆರ್.ಎಸ್.ಚಂದ್ರಶೇಖರರಾವ್, ಕಾರ್ಯದರ್ಶಿ, ವಿಶ್ವನಾಥಸ್ವಾಮಿ, ಕೋಶಾಧ್ಯಕ್ಷರು, ಸಂಘಟನಾ ಕಾರ್ಯದರ್ಶಿ ರಾಜಶೇಖರ್, ಮಹಲಿಂಗಪ್ಪ, ರಾಜಣ್ಣ, ತಿಮ್ಮಪ್ಪ, ವೆಂಕಟೇಶ್, ರಂಗನಾಥ, ಮಹೇಶ್, ಗುಂಡಪ್ಪ, ಗೋವಿಂದರಾಜು, ಎಂ.ಎಸ್.ನಾಗರಾಜು ಉಪಸ್ಥಿತರಿದ್ದರು.
